Sunday | June 14, 2026 |

ಅನುದಾನದಲ್ಲಿ ಶೇ. 2 ರಷ್ಟು ಮಾತ್ರ ವೆಚ್ಚ; 18 ಇಲಾಖೆಗಳಲ್ಲಿ ಬಿಡಿಗಾಸು ಖರ್ಚಾಗಿಲ್ಲ

Support THE-FILE

spot_img

ಬೆಂಗಳೂರು; ಕೊರೊನಾ ವೈರಾಣು ಅಬ್ಬರಕ್ಕೆ ರಾಜ್ಯವೇ ತತ್ತರಿಸಿ ಹೋಗಿದೆ. ಸಂಪನ್ಮೂಲ ಸಂಗ್ರಹ ಸ್ಥಗಿತದಿಂದಾಗಿ ಬಹುತೇಕ ಯೋಜನೆಗಳನ್ನು ಕೈ ಬಿಡಲಾಗಿದೆ. ಲಾಕ್‌ಡೌನ್‌ ಮತ್ತಿತರ ಕ್ರಮಗಳು ಅನುದಾನದ ಬಳಕೆ ಮೇಲೂ ಪರಿಣಾಮ ಬೀರಿವೆ. ಆಯವ್ಯಯದಲ್ಲಿ ಘೋಷಣೆಯಾಗಿದ್ದ ಒಟ್ಟು ಮೊತ್ತಕ್ಕೆ ಎದುರಾಗಿ 2020ರ ಏಪ್ರಿಲ್‌ ಅಂತ್ಯಕ್ಕೆ ಕೇವಲ ಶೇ. 2 ರಷ್ಟು ಮಾತ್ರ ವೆಚ್ಚವಾಗಿದೆ.

ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರ ಅಧ್ಯಕ್ಷತೆಯಲ್ಲಿ 2020ರ ಮೇ 22ರಂದು ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆ ನಡವಳಿಯಿಂದ ಶೇ.2ರಷ್ಟು ಮಾತ್ರ ವೆಚ್ಚ ಮಾಡಿರುವ ಸಂಗತಿ ದಾಖಲೆಯಿಂದ ತಿಳಿದು ಬಂದಿದೆ. ನಗರಾಭಿವೃದ್ದಿ ಇಲಾಖೆ ಸೇರಿದಂತೆ ಒಟ್ಟು 18 ಇಲಾಖೆಗಳು ಬಿಡಿಗಾಸನ್ನೂ ಖರ್ಚು ಮಾಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ ಉಪ ಯೋಜನೆಯಡಿಯಲ್ಲಿ ಒಟ್ಟು 3,160.56 ಕೋಟಿ ರು. ಖರ್ಚಾಗದೇ ಉಳಿದಿರುವುದು ಗೊತ್ತಾಗಿದೆ.

ಬಜೆಟ್‌ನಲ್ಲಿ ಕಲ್ಪಿಸಿದ್ದ ಒಟ್ಟು 2,37,893 ಕೋಟಿ ರು ಅನುದಾನದ ಪೈಕಿ ಏಪ್ರಿಲ್‌ ಅಂತ್ಯಕ್ಕೆ 4,486 ಕೋಟಿ ರು. ವೆಚ್ಚವಾಗಿದೆ. 2018-19ರಲ್ಲಿ 2,29,924 ಕೋಟಿ ರು. ಪೈಕಿ 2,11,920 ಕೋಟಿ ರು. ವೆಚ್ಚವಾಗಿದ್ದರೆ (ಶೇ.92.2) 2019-20ನೇ ಸಾಲಿನಲ್ಲಿ 2,34,150.54 ಕೋಟಿ ರು. ಪೈಕಿ 2,16,473 ಕೋಟಿ ರು. (ಶೇ.92.4) ವೆಚ್ಚವಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ. 

2019-20ನೇ ಸಾಲಿನ ಮಹಿಳಾ ಉದ್ದೇಶಿತ ಆಯವ್ಯಯದ ಬಿ ವರ್ಗೀಕರಣ ಯೋಜನೆಗಳಲ್ಲಿ ಮಾರ್ಚ್‌ 2020ರ ಅಂತ್ಯಕ್ಕೆ 41,150 ಕೋಟಿ ರು.ಗಳ ಪೈಕಿ ಮಹಿಳೆಯರಿಗಾಗಿ 16,256 ಕೋಟಿ ರು. ಮೀಸಲಿರಿಸಲಾಗಿತ್ತು. ಈ ಹಣದಲ್ಲಿ ಫೆಬ್ರುವರಿಯಲ್ಲಿ 11,625 ಕೋಟಿ ರು. ಖರ್ಚು ಮಾಡಿದ್ದರೆ ಮಾರ್ಚ್ 2020ರ ಅಂತ್ಯಕ್ಕೆ ಒಟ್ಟು 987.16 ಕೋಟಿ ರು. ವೆಚ್ಚ ಮಾಡಲಾಗಿದೆ.

ನಗರಾಭಿವೃದ್ದಿ, ಗ್ರಾಮೀಣಾಭಿವೃದ್ಧಿ, ಯುವಸಬಲೀಕರಣ, ಲೋಕೋಪಯೋಗಿ, ಕಂದಾಯ, ಆಹಾರ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಪ್ರಾಥಮಿಕ ಶಿಕ್ಷಣ, ಅರಣ್ಯ, ಸಹಕಾರ, ಉನ್ನತ ಶಿಕ್ಷಣ, ಒಳಾಡಳಿತ, ವಾಣಿಜ್ಯ ಕೈಗಾರಿಕೆ, ರೇಷ್ಮೆ, ಕಾನೂನು, ಮುಜುರಾಯಿ, ವೈದ್ಯಕೀಯ ಶಿಕ್ಷಣ, ಕೃಷಿ, ಕನ್ನಡ ಸಂಸ್ಕೃತಿ ಇಲಾಖೆಗಳು ಮಾರ್ಚ್‌ ಅಂತ್ಯಕ್ಕೆ ಬಿಡಿಗಾಸನ್ನೂ ಖರ್ಚು ಮಾಡದಿರುವುದು ಗೊತ್ತಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾರ್ಚ್‌ ಅಂತ್ಯಕ್ಕೆ 513.88 ಕೋಟಿ ರು. ಖರ್ಚು ಮಾಡುವ ಮೂಲಕ ಮೊದಲ ಸ್ಥಾನಲ್ಲಿದೆ. ಆರೋಗ್ಯ ಇಲಾಖೆ 185.10 ಕೋಟಿ ರು. ಖರ್ಚು ಮಾಡಿದ್ದರೆ ಪಶು ಸಂಗೋಪನೆ ಇಲಾಖೆ 118.13 ಕೋಟಿ ರು., ತೋಟಗಾರಿಕೆ 55.46 ಕೋಟಿ ರು., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 43.62 ಕೋಟಿ ರು., ಖರ್ಚು ಮಾಡಿರುವುದು ತಿಳಿದು ಬಂದಿದೆ.

ಅದೇ ರೀತಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಪರಿಷ್ಕೃತ ಅಂದಾಜು 19,620 ಕೋಟಿ ರು. ಪೈಕಿ 17,666.46 ಕೋಟಿ ರು. ಖರ್ಚಾಗಿದ್ದು, ಇನ್ನೂ 1,953.54 ಕೋಟಿ ರು., ಬಾಕಿ ಉಳಿದಿದೆ. ಹಾಗೆಯೇ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 7,952 ಕೋಟಿ ರು. ಪೈಕಿ 6,744.98 ಕೋಟಿ ರು. ವೆಚ್ಚವಾಗಿದ್ದು, ಇನ್ನೂ 1,207.02 ಕೋಟಿ ರು. ಬಾಕಿ ಉಳಿದಿರುವುದು ಗೊತ್ತಾಗಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img