Monday | September 14, 2026 |

ರಾಜಸ್ವ ವರಮಾನಕ್ಕೂ ಕನ್ನ; ಮೈತ್ರಿ ಸರ್ಕಾರದಲ್ಲಿ ಪರಿಶೀಲನೆಯೂ ಇರಲಿಲ್ಲ

Support THE-FILE

spot_img

ಬೆಂಗಳೂರು; ಖರೀದಿಗಳ ಮೇಲಿನ ತೆರಿಗೆ ಜಮೆ ಹೆಸರಿನಲ್ಲಿ ರಾಜ್ಯದ ವರಮಾನವನ್ನೂ ಕೊರೆದು ಹಾಕಲಾಗುತ್ತಿದೆ. ಇದನ್ನು ತಡೆಗಟ್ಟಬೇಕಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಈವರೆವಿಗೂ ಯಾವುದೇ ಮಾರ್ಗವನ್ನು ಕಂಡುಕೊಂಡಿಲ್ಲ.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಖರೀದಿಗಳ ಮೇಲಿನ ತೆರಿಗೆ ಜಮೆಯನ್ನು ವಿಶ್ಲೇಷಿಸಿದೆ. ತೆರಿಗೆ ಜಮೆ ಹೆಸರಿನಲ್ಲಿ ರಾಜ್ಯದ ವರಮಾನವನ್ನು ಕೊರೆದು ಹಾಕುವುದನ್ನು ತಡೆಯುವ ಸಲುವಾಗಿ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ.

ಅಲ್ಲದೆ ಖರೀದಿಗಳ ಮೇಲಿನ ತೆರಿಗೆ ಜಮೆ ಕೋರಿಕೆಗಳನ್ನು ಪರಿಶೀಲಿಸುವ, ಖಚಿತಪಡಿಸಿಕೊಳ್ಳುವ ಸಲುವಾಗಿ ಸ್ಥಳೀಯ ಕಚೇರಿಗಳಲ್ಲಿ ಪರಿಶೀಲನಾ ಪ್ರಕ್ರಿಯೆ ಕೈಗೊಳ್ಳುವ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದೂ ಶಿಫಾರಸ್ಸು ಮಾಡಿದೆ.

2018 ಮೇ ಮತ್ತು ಜನವರಿ 2019ರ ನಡುವೆ ಬೆಂಗಳೂರು, ಹಾಸನ, ಬಳ್ಳಾರಿ, ದಾವಣಗೆರೆ ಜಿಲ್ಲಾ ಕಚೇರಿ ವ್ಯಾಪ್ತಿಯಲ್ಲಿನ ವರ್ತಕರು ಖರೀದಿಗಳ ಮೇಲೆ ಕೋರಿದ್ದ ಖರೀದಿ ಮೇಲಿನ ತೆರಿಗೆ ಜಮೆ ಮೊತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರಾಟಗಳ ಮೇಲಿನ ತೆರಿಗೆ ಪಾವತಿಸಿದ್ದರು ಎಂದು ಸಿಎಜಿ ವರದಿ ವಿವರಿಸಿದೆ.

ಖರೀದಿಗಳ ಮೇಲಿನ ತೆರಿಗೆ ಜಮೆಗೆ ಅನುಗುಣವಾಗಿ 32 ಮಾರಾಟಗಳನ್ನು ಮಾಡಿದ ವರ್ತಕರಿದ್ದರು. ಇ-ಎಫ್‌ಎಸ್‌ನಲ್ಲಿನ ಮಾರಾಟಗಳನ್ನು ಮಾಡುವ ವರ್ತಕರು ವಿವರಗಳನ್ನು ಪರಿಶೀಲಿಸಿದ್ದ ಸಿಎಜಿ, ಖರೀದಿಗಳ ಮೇಲಿನ ತೆರಿಗೆ ಜಮೆಗೆ ಅನುಮತಿಸಿದ್ದಂತಹ ಅವಧಿಯಲ್ಲಿ 14 ವರ್ತಕರು ನೋಂದಣಿಯನ್ನು ರದ್ದುಗೊಳಿಸಿದ್ದರು ಅಥವಾ ನೋಂದಣಿಯನ್ನೇ ಮಾಡಿಸಿರಲಿಲ್ಲ ಎಂದೂ ಪತ್ತೆ ಹಚ್ಚಿದ್ದಾರೆ.

ಖರೀದಿಗಳನ್ನು ಮಾಡಿದ ವರ್ತಕರು ಕೋರಿದ್ದಂತಹ ಖರೀದಿಗಳ ಮೇಲಿನ ತೆರಿಗೆ ಜಮೆ ಮೊತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರಾಟಗಳ ಮೇಲಿನ ತೆರಿಗೆ ಪಾವತಿಸಿದ್ದರು. ಇದರಿಂದಾಗಿ ಇಲಾಖೆಯು ಅನುಮತಿ ನೀಡಿದ್ದ 0.59 ಕೋಟಿ ಮೊತ್ತದಷ್ಟು ಖರೀದಿಗಳ ಮೇಲಿನ ತೆರಿಗೆ ಜಮೆಗೆ ಪ್ರಮಾಣಕ್ಕನುಗುಣವಾಗಿ ಘೋಷಿಸಿದ್ದ ಮಾರಾಟಗಳ ಮೇಲಿಕನ ತೆರಿಗೆ ಕೇವಲ 0.03 ಕೋಟಿ ಆಗಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಪ್ರಮಾಣಕ್ಕಗುನುಗುಣವಾಗಿ ಮಾರಾಟಗಳ ಮೇಲಿನ ತೆರಿಗೆಯನ್ನು ವಸೂಲು ಮಾಡದೆಯೇ ಖರೀದಿಗಳ ಮೇಲಿನ ತೆರಿಗೆ ಜಮೆಯನ್ನು ಅನುಮತಿಸಿದ್ದು 0.56 ಕೋಟಿ ಮೊತ್ತದಷ್ಟು ವರಮಾನ ನಷ್ಟಕ್ಕೆ ಕಾರಣವಾಗಿದೆ. ಅಲ್ಲದೆಯೇ 0.06 ಕೋಟಿ ಮೊತ್ತದಷ್ಟು ದಂಡ ಹಾಗೂ 0.53 ಕೋಟಿ ಮೊತ್ತದಷ್ಟು ಬಡ್ಡಿಯನ್ನು ವಿಧಿಸಬೇಕಿತ್ತು. ಇದೆಲ್ಲರ ಒಟ್ಟಾರೆ ಬಾಕಿ 1.15 ಕೋಟಿ ಆಗುತ್ತದೆ ಎಂದು ಸಿಎಜಿ ವರದಿ ವಿವರಿಸಿದೆ.

ಮಾರಾಟ ಮಾಡಿದ ವರ್ತಕರು ತಾವು ಖರೀದಿಯನ್ನು ಮಾಡಿದ ವರ್ತಕರಿಂದ ತೆರಿಗೆ ಸಂಗ್ರಹಿಸಿದ ಸಮಯದಲ್ಲಿ ನೋಂದಾಯಿತ ವರ್ತಕರಾಗಿರಲಿಲ್ಲ ಎಂದು ಪತ್ತೆ ಹಚ್ಚಿದ ಸಿಎಜಿ, ಈ ರೀತಿ ಸಂಗ್ರಹಿಸಲಾದ ಮೊತ್ತವು ಇ-ಎಫ್‌ಎಸ್‌ನಲ್ಲಿ ಪಾವತಿಸಿರಲಿಲ್ಲ ಎಂದೂ ಹೇಳಿದೆ.

‘ಯಾರಿಂದ ತೆರಿಗೆ ವರಮಾನವನ್ನು ವಸೂಲಾತಿ ಮಾಡಬೇಕು ಎಂಬುದನ್ನು ಹೊರತುಪಡಿಸಿದಂತೆ ಮಾರಾಟಗಳನ್ನು ಮಾಡಿದ ವರ್ತಕರು ಮಾರಾಟಗಳ ಮೇಲಿನ ತೆರಿಗೆಯನ್ನು ಪಾವತಿಸದಿದ್ದಲ್ಲಿ ಹಾಗೂ ಖರೀದಿಗಳನ್ನು ಮಾಡಿದ ವರ್ತಕರು ಖರೀದಿಗಳ ಮೇಲಿನ ತೆರಿಗೆ ಜಮೆ ಕೋರಿದಲ್ಲಿ ರಾಜ್ಯದ ರಾಜಸ್ವ ವರಮಾನವು ಕಳೆದುಹೋಗುತ್ತದೆ,’ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ತೆರಿಗೆದಾರರ ಹಣವನ್ನು ಅಪವ್ಯಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿಯೇ ಈಗ ಅಧಿಕಾರದಲ್ಲಿದ್ದರೂ ರಾಜಸ್ವ ವರಮಾನವನ್ನು ಕೊರೆದು ಹಾಕುವುದನ್ನು ತಡೆಯಲು ಈವರೆವಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಸಕ್ತ ಸಾಲಿನಲ್ಲಿಯೂ ರಾಜಸ್ವ ವರಮಾನ ಮತ್ತಷ್ಟು ಖೋತಾ ಆಗುವ ಸಾಧ್ಯತೆಗಳು ಹೆಚ್ಚಿವೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img