Monday | June 15, 2026 |

ಮಾನವ ಸಂಪನ್ಮೂಲ ಸೇವೆಗಳ ಹೊರಗುತ್ತಿಗೆ; ಮೂರು ಕಂಪನಿಗಳಿಗೆ 11.56 ಕೋಟಿ ಪಾವತಿ ಬಹಿರಂಗ

Support THE-FILE

spot_img

ಬೆಂಗಳೂರು; ವಿಶೇಷ ಜ್ಞಾನ ಮತ್ತು ಕೌಶಲ್ಯಗಳ ಅಗತ್ಯವಿರುವ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂಬ ಹೆಗ್ಗಳಿಕೆ ಹೊಂದಿರುವ ನೀತಿ ಆಯೋಗವು ಇದೀಗ ಮಾನವ ಸಂಪನ್ಮೂಲ ಸೇವೆಗಳಿಗೆ ಮೂರು ಖಾಸಗಿ ಕಂಪನಿಗಳಿಗೆ  ಹೊರಗುತ್ತಿಗೆ ನೀಡಿರುವುದು ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

ಸರಕಾರದ ಆಡಳಿತ ಯಂತ್ರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸೇವೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವಂತೆ ನೀತಿ ಆಯೋಗವು ನೀಡಿದ್ದ ಸಲಹೆ ಬೆನ್ನಲ್ಲೇ ಇದೀಗ ತನ್ನದೇ ಸಂಸ್ಥೆಯನ್ನು ಮಾನವ ಸಂಪನ್ಮೂಲ ಸೇವೆಗಳನ್ನು ಪಡೆಯಲು  ಹೊರಗುತ್ತಿಗೆ ಕಂಪನಿಗಳ ಸೇವೆಯನ್ನು ಪಡೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

2015ರಿಂದ 2023ರ ಸೆಪ್ಟಂಬರ್‍‌ವರೆಗೆ ಹೊರಗುತ್ತಿಗೆ ಪಡೆದಿರುವ ನೀತಿ ಆಯೋಗವು ಈ ಸಂಬಂಧ 11.56 ಕೋಟಿ ರು.ಗಳನ್ನು ಪಾವತಿಸಿರುವುದು ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

ಅಮರಾವತಿಯ ಅಜಯ್‌ ಬಸುದೇವ್‌ ಬೋಸ್‌ ಅವರು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಕೋರಿದ್ದರು. ಇದಕ್ಕೆ 2023ರ ನವೆಂಬರ್‍‌ 23ರಂದು ಉತ್ತರ ನೀಡಿರುವ ಕೇಂದ್ರ ಸರ್ಕಾರವು ನೀತಿ ಆಯೋಗವನ್ನು ಮುನ್ನೆಡೆಸಲು ಹೊರಗುತ್ತಿಗೆ ನೀಡಿರುವ ವಿಚಾರವನ್ನು ಬಹಿರಂಗಪಡಿಸಿದೆ.

ನೊಯ್ಡಾದ ಸುಲಭ್‌ ಇಂಟರ್‍‌ ನ್ಯಾಷನಲ್‌, ಒಯೊನಿಕ್ಸ್‌ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌, ಫರಿದಾಬಾದ್‌ನ ಉತ್ಕರ್ಷ್‌ ಯುಟಿಲಿಟಿಸ್‌ ಗೆ ಒಟ್ಟು 11.56 ಕೋಟಿ ರು. ಮೊತ್ತದಲ್ಲಿ ಹೊರಗುತ್ಗಿಗೆ ಕಂಪನಿಗಳಿಗೆ 2015ರ ಜನವರಿಯಿಂದ 2023ರ ಸೆಪ್ಟಂಬರ್‍‌ವರೆಗೆ ಪಾವತಿಸಿರುವುದು ಗೊತ್ತಾಗಿದೆ.

ಸರಕಾರದ ಆಡಳಿತ ಯಂತ್ರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸೇವೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವಂತೆ ನೀತಿ ಚಿಂತಕರ ಚಾವಡಿ ನೀತಿ ಆಯೋಗ ಸಲಹೆ ನೀಡಿತ್ತು.
ಲ್ಯಾಟರಲ್ ಎಂಟ್ರಿಯ ಮೂಲಕ ಆಡಳಿತ ವ್ಯವಸ್ಥೆಗೆ ಪರಿಣಿತರನ್ನು ಒಳಗೊಳ್ಳುವಂತೆ ಶಿಫಾರಸು ಮಾಡಿತ್ತು. ಈ ಕ್ರಮವು “ಸ್ಥಾಪಿತ ವೃತ್ತಿ ಅಧಿಕಾರಶಾಹಿಗೆ ಸ್ಪರ್ಧೆಯೊಡ್ಡಲಿದೆ ಎಂದು ಹೇಳಲಾಗಿತ್ತು.

ನೀತಿ ಆಯೋಗವು ಆಡಳಿತ-ಸಂಬಂಧಿತ ಕಾರ್ಯಗಳ ಸಂಪೂರ್ಣ ಡಿಜಿಟಲೀಕರಣದ ಗುರಿಯನ್ನು ಹೊಂದಿತ್ತು. ಆರ್ಥಿಕತೆಯ ಹೆಚ್ಚುತ್ತಿರುವ ಸಂಕೀರ್ಣತೆಯು ನೀತಿ-ನಿರ್ಮಾಣವು ಒಂದು ವಿಶೇಷವಾದ ಚಟುವಟಿಕೆಯಾಗಿದೆ. ಆದ್ದರಿಂದ, ಲ್ಯಾಟರಲ್ ಎಂಟ್ರಿ ಮೂಲಕ ಪರಿಣಿತರನ್ನು ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲು ಅತ್ಯಗತ್ಯ ಎಂದು ಪ್ರತಿಪಾದಿಸಿತ್ತು.

ಅಧಿಕಾರಿಗಳು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆಯಲು ಪ್ರೋತ್ಸಾಹಿಸಲಿದೆ. ದೀರ್ಘಾವಧಿಯ ಪೋಸ್ಟಿಂಗ್ ವ್ಯವಸ್ಥೆಯಿಂದ ಬದಲಾಯಿಸಬಹುದು ಎಂದು ವರದಿ ಹೇಳಿತ್ತು.

ತೀವ್ರ ತರಬೇತಿಯ ಮೂಲಕ ವಿಶೇಷತೆಯ ಆಯ್ಕೆಯ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಅಧಿಕಾರಿಗಳನ್ನು ಪ್ರೋತ್ಸಾಹಿಸಬೇಕು. ಆಂತರಿಕ ಸಿಬ್ಬಂದಿಯ ಈ ವಿಶೇಷತೆಯು ಸ್ಥಿರ-ಅವಧಿಯ ಒಪ್ಪಂದಗಳಲ್ಲಿ ಹೆಚ್ಚು ಪರಿಣಿತ ಸಿಬ್ಬಂದಿಯ ಭಾಗಶಃ ಪ್ರವೇಶದಿಂದ ಪೂರಕವಾಗಿರಬೇಕು” ಎಂದು ಹೇಳಿತ್ತು.

ಈ ವ್ಯವಸ್ಥೆಯು ಉನ್ನತ ಪ್ರತಿಭೆ ಮತ್ತು ಶಕ್ತಿಯನ್ನು ಸರ್ಕಾರಿ ವ್ಯವಸ್ಥೆಯಲ್ಲಿ ತರುತ್ತದೆ. ಮತ್ತು ಸಚಿವಾಲಯಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ತಜ್ಞರನ್ನು ಮೂರರಿಂದ ಐದು ವರ್ಷಗಳ ಗುತ್ತಿಗೆ ಅವಧಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದ್ದನ್ನು ಸ್ಮರಿಸಬಹುದು.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img