Thursday | June 18, 2026 |

ಬಾಕಿ ಹಣ, ಬಡ್ಡಿ ಸಹಿತ ಪಾವತಿ; ನಿಯಮಬಾಹಿರವಾಗಿ 350 ಪ್ರಕರಣಗಳ ರದ್ದುಪಡಿಸಿದ್ದ ಮೂಡಾ

Support THE-FILE

spot_img

ಬೆಂಗಳೂರು; ಮಾನವೀಯತೆ ದೃಷ್ಟಿ ಹೆಸರಿನಲ್ಲಿ ಬಾಕಿ ಹಣ ಮತ್ತು ಬಡ್ಡಿ ಸಹಿತ ಪಾವತಿಸಿಕೊಂಡು ಸುಮಾರು 300-350 ಪ್ರಕರಣಗಳನ್ನು ರದ್ದುಪಡಿಸಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ನಿಯಮಗಳಲ್ಲಿ ಅವಕಾಶವಿರದಿದ್ದರೂ ನಿಗದಿತ ಅವಧಿ ನಂತರವೂ ಹಣ  ಪಾವತಿಸಿಕೊಂಡಿತ್ತು.

 

ಅಲ್ಲದೇ ಅನಧಿಕೃತ ಜಮೀನುಗಳಲ್ಲಿನ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿತ್ತು. ಮಾನದಂಡಗಳನ್ನು ಬದಿಗೊತ್ತಿ ಏಕ ನಿವೇಶನ ವಿನ್ಯಾಸಕ್ಕೆ ಅನುಮತಿ ಕೊಟ್ಟಿತ್ತು.  ಸಿಎ ನಿವೇಶನಗಳ ಪ್ರಕರಣಗಳಲ್ಲಿಯೂ ಅವಕಾಶವಿರದಿದ್ದರೂ ಪ್ರಾರಂಭಿಕ ಠೇವಣಿಗಳನ್ನು ಹಿಂದಿರುಗಿಸಿತ್ತು. ನಿಗದಿತ ಅವಧಿಯ ನಂತರ ಮೊತ್ತ ಪಾವತಿಸಿಕೊಂಡು ಹಲವು ಪ್ರಕರಣಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು.

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಅವರೂ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವ ಬೆನ್ನಲ್ಲೇ ಮೂಡಾದ 2021ರ ಮಾರ್ಚ್‌ 20ರಂದು ನಡೆದಿದ್ದ ಸಭೆ ನಡವಳಿಗಳ ಕುರಿತು ನಗರಾಭಿವೃದ್ಧಿ ಇಲಾಖೆಯು ಮಾಹಿತಿ, ಸ್ಪಷ್ಟೀಕರಣ ಕೋರಿದ್ದ ಪತ್ರವು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2022ರ ಆಗಸ್ಟ್‌ 24ರಂದು ಮೂಡಾ ಆಯುಕ್ತರಿಗೆ ಬರೆದಿದ್ದ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮೂಡಾ ವ್ಯಾಪ್ತಿಯಲ್ಲಿ ಐದು ಸಾವಿರ ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದೆ ಎಂದು ಆರೋಪಿಸಿರುವ ಪ್ರತಿಪಕ್ಷವು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಸಜ್ಜಾಗಿರುವ ನಡುವೆಯೇ 2 ವರ್ಷಗಳ ಹಿಂದೆ ನಗರಾಭಿವೃದ್ದಿ ಇಲಾಖೆಯು ಮೂಡಾಕ್ಕೆ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ.

 

ಈ ಪತ್ರದ ಕುರಿತುಅಧಿಕಾರಿಗಳು  ಸಚಿವ ಬೈರತಿ ಸುರೇಶ್‌ ಅವರ ಗಮನಕ್ಕೂ ತಂದಿದ್ದರು ಎಂದು ತಿಳಿದು ಬಂದಿದೆ.

 

ಪತ್ರದಲ್ಲೇನಿದೆ?

 

ವಿಷಯ ಸಂಖ್ಯೆ 4(3)ರಲ್ಲಿ ಸಿ ಎ ನಿವೇಶನಗಳ ಪ್ರಕರಣಗಳ ಕಟ್ಟಡ ನಿರ್ಮಿಸದೇ ಇರುವಂತಹ ನಿವೇಶನಗಳನ್ನು ರದ್ದುಪಡಿಸಲು ಮತ್ತು ಉಳಿದ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಪ್ರಕರಣವಾರು ಪರಿಶೀಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರಾರಂಭಿಕ ಠೇವಣಿಯನ್ನು ಸಂಸ್ಥೆಗೆ ಹಿಂದಿರುಗಿಸಲು ನಿರ್ಣಯಿಸಲಾಗಿರುತ್ತದೆ. ಆದರೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ಸಿಎ ನಿವೇಶನಗಳ ಹಂಚಿಕೆ) ನಿಯಮಗಳು 1991ರಲ್ಲಿ ಪ್ರಾರಂಭಿಕ ಠೇವಣಿಗಳನ್ನು ಹಿಂದಿರುಗಿಸಲು ಅವಕಾಶವಿರುವುದಿಲ್ಲ ಎಂದು ಪತ್ರದಲ್ಲಿ ಸರ್ಕಾರದ ಕಾರ್ಯದರ್ಶಿ ಅವರು ಸ್ಪಷ್ಟೀಕರಿಸಿರುವುದು ಗೊತ್ತಾಗಿದೆ.

 

ವಿಷಯ ಸಂಖ್ಯೆ ರಲ್ಲಿ ಅರ್ಜಿದಾರರಿಗೆ 1988ನೇ ಇಸವಿಯಲ್ಲಿ ನಿವೇಶನ ಮಂಜೂರು ಮಾಡಲಾಗಿದ್ದು ನಿವೇಶನದ ಬೆಲೆ 20,000 ರು. ಎಂದು ತಿಳಿಸಿದೆ. ಒಟ್ಟು ಮೊತ್ತದಲ್ಲಿ 500 ರು.ಗಳಿಗೆ ಮಾತ್ರ ಬಾಕಿದಾರರು ಆಗಿರುವುದರಿಂಂದ ಮಾನವೀಯತೆ ದೃಷ್ಟಿಯಿಂದ ಬಾಕಿ ಹಣ ಬಡ್ಡಿ ಸಹಿತ ಪಾವತಿಸಿಕೊಂಡು ಕ್ರಮ ವಹಿಸಲು ತೀರ್ಮಾನಿಸಲಾಗಿರುತ್ತದೆ. ಇದೇ ತರಹದ 300-350 ಪ್ರಕರಣಗಳನ್ನು ರದ್ದುಪಡಿಸಿದ್ದು ನಿಗದಿತ ಅವಧಿಯ ನಂತರ ಮೊತ್ತ ಪಾವತಿಸಿಕೊಂಡು ಹಂಚಿಕೆ ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ವಿಷಯ ಸಂಖ್ಯೆ 12ರಲ್ಲಿ 1984ನೇ ಇಸವಿಯಲ್ಲಿ ಹಂಚಿಕೆ ಮಾಡಿರುವ ನಿವೇಶನದ ಮೊತ್ತವನ್ನು ಪಾವತಿಸದೇ ಇರುವುದರಿಂದ 1998ರಲ್ಲಿ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮತ್ತು ಮಾನವೀಯತೆ ದೃಷ್ಟಿಯಲ್ಲಿ ಪ್ರಸ್ತುತ ಮಾರ್ಗಸೂಚಿ ಬೆಲೆ ಬಾಕಿ ಹಣ ಪಾವತಿಸಿಕೊಂಡು ನಿವೇಶನ ಹಂಚಿಕೆ ರದ್ದತಿಯನ್ನು ವಾಪಸ್ಸು ಪಡೆಯಲು, ಮಂಜೂರಾತಿ ಆದೇಶ ಊರ್ಜಿತಗೊಳಿಸಲು ಮತ್ತು ಹಣ ಪಾವತಿಸಿಕೊಂಡು ಗುತ್ತಿಗೆ ಒಪ್ಪಂದ ಪತ್ರ ನೀಡಲು ನಿರ್ಣಯಿಸಲಾಗಿದೆ. ನಿಗದಿತ ಅವಧಿಯ ನಂತರ ಮೊತ್ತ ಪಾವತಿಸಿಕೊಂಡು ಹಂಚಿಕೆ ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ವಿಷಯ ಸಂಖ್ಯೆ; 32, 33, 34, 35, 36,37,38,39, 40, 41, 42, 43, 44,45,46,47,48,49,50, 51, 52, 53, 54, 55, 57 ಮತ್ತು 58ರಲ್ಲಿ ನಿವೇಶನ ಬಿಡುಗಡೆ ಪ್ರಕರಣಗಳಲ್ಲಿ ಶೇ.20, ಶೆ.10 ಮತ್ತು ಎ.60, ಶೆ.5ರಂತೆ ನಿವೇಶನಗಳನ್ನು ಬಿಡುಗಡೆ ಮಾಡಲು ತೀಮಾfನಿಸಲಾಗಿದ್ದು ಯಾವ ಕಾಯದೆ, ನಿಯಮ, ಸುತ್ತೋಲೆಗಳನ್ವಯ ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆ ಮಾಹಿತಿ, ಸ್ಪಷ್ಟೀಕರಣ ಒದಗಿಸಬೇಕು ಎಂದು ನಿರ್ದೇಶಿಸಿದೆ.

 

ವಿಷಯ ಸಂಖ್ಯೆ 62ರಲ್ಲಿ ಅನಧಿಕೃತ ವಿಭಜನೆಯಾದ ಪ್ರದೇಶದಲ್ಲಿ ಕನಿಷ್ಟ 14 ಗಂಟೆಪ್ರದೇಶ ಹೊಂದಿದ್ದಲ್ಲಿ ನಿಯಮಾನುಸಾರ ಬಡಾವಣೆ/ಅಭಿವೃದ್ದಿಗೆ ಅನುಮೋದನೆ ನೀಡುವುದು ಸೂಕ್ತವೆಂದು ಅಭಿಪ್ರಾಯಿಸಿತ್ತು.

 

ಅದರಂತೆ ಅನುಮೋದನೆಗೆ ನಿಯಮಾನುಸಾರ ಪರಿಶೀಲಿಸಿ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಲು ತೀರ್ಮಾನಿಸಿತ್ತು. ಭೂ ಪರಿವರ್ತನೆಯಾದ ನಂತರ ಪ್ರಾಧಿಕಾರದ ಅನುಮೋದನೆಯಿಲ್ಲದೇ ವಿಭಜನೆಯಾಗಿರುವ ಜಮೀನುಗಳು ಅನಧಿಕೃತವಾಗಿರುವುದರಿಂದ ಇವುಗಳಿಗೆ ವಿನ್ಯಾಸ ನಕ್ಷೆ ಅನುಮೋದನೆ ನೀಡಲು ಅವಕಾಶವಿರುವುದಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.

 

ವಿಷಯ ಸಂಖ್ಯೆ 65ರಲ್ಲಿ ಶೇ.2ರಷ್ಟು ಶುಲ್ಕವನ್ನ ಪಾವತಿಸಿಕೊಳ್ಳಲು ಮತ್ತು ಸದರಿ ಶುಲ್ಕದ ಶೆ. 50ರಷ್ಟು ಅರಣ್ಯ ಅಭಿವೃದ್ಧಿಗಾಗಿ ಹಾಗೂ ಉಳಿದ ಶೇ.50ರಷ್ಟನ್ನು ಹಸರೀಕರಣಕ್ಕಾಗಿ ಬಳಕೆ ಮಾಡಲು ತೀಮಾfನಿಸಲಾಗಿರುತ್ತದೆ. ಹಸರೀಕರಣ ಶುಲ್ಕಪಾವತಿಸಿಕೊಳ್ಳಲು ಅವಕಾಶವಿರುವುದಿಲ್ಲ.

 

ವಿಷಯ ಸಂಖ್ಯೆ 68ರಲ್ಲಿ ಮಹಾನಗರಪಾಲಿಕೆಯಲ್ಲಿ ದುಪ್ಪಟ್ಟು ಕರ ವಿಧಿಸಿ, ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರ ನೀಡಲು ಕ್ರಮ ವಹಿಸಲು ಸೂಕ್ತವೆಂದು ಅನುಮೋದನೆ ನೀಡಲಾಗಿರುತ್ತದೆ. ಈ ರೀತಿಯ ದುಪ್ಪಟ್ಟು ಕರ ವಿಧಿಸಲು ಯಾವ ಕಾಯ್ದೆಯಡಿ ಅವಕಾಶವಿರುತ್ತದೆ ಎಂಬ ಬಗ್ಗೆ ಮಾಹಿತಿ, ಸ್ಪಷ್ಟೀಕರಣ ಒದಗಿಸಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.

 

ವಿಷಯ ಸಂಖ್ಯೆ 84ರಲ್ಲಿ ಏಕ ನಿವೇಶನ ವಿನ್ಯಾಸ ಅನುಮೋದನೆಗೆ ತನ್ನದೇ ಆದ ಮಾನದಂಡಗಳನ್ನು ರೂಪಿಸಿದ್ದು ಅದನ್ನು ಅನುಸರಿಸಲು ತೀರ್ಮಾನಿಸಲಾಗಿರುತ್ತದೆ. ಸದರಿ ಅಅಂಶಗಳನ್ನು ನಿಯಮಾವಳಿಗಳಲ್ಲಿ ಅವಳಡಿಸದೇ ಅನುಸರಿಸಲು ಅವಕಾಶವಿರುವುದಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img