Sunday | June 14, 2026 |

ಮೈಕ್‌, ಹಾಡು, ಡ್ಯಾನ್ಸ್‌, ಊಟದ ವ್ಯವಸ್ಥೆ; ಸ್ವ ಹಿತಾಸಕ್ತಿ ಉದ್ದೇಶ, ಮರೆಮಾಚಿದ್ದ ಸತ್ಯ ಬಯಲು

Support THE-FILE

spot_img

ಬೆಂಗಳೂರು; ತುಮಕೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ನಿಲಯದಲ್ಲಿನ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರೊಂದಿಗೆ ಕೈಕೈ ಹಿಡಿದು ಡ್ಯಾನ್ಸ್‌ ಮಾಡಿದ್ದ ಕಾರ್ಯಕ್ರಮದ ಹಿಂದೆ ಸ್ವ ಹಿತಾಸಕ್ತಿಯ ಉದ್ದೇಶವಿತ್ತು ಎಂದು ತ್ರಿಸದಸ್ಯ ಸಮಿತಿಯ ಸತ್ಯಶೋಧನಾ ಸಮಿತಿಯು ವರದಿಯು ಪತ್ತೆ ಹಚ್ಚಿದೆ.

 

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ವಿದ್ಯಾರ್ಥಿನಿಯರೊಂದಿಗೆ ಅಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು  ಸಭ್ಯತೆ ಮೀರಿ ಡ್ಯಾನ್ಸ್‌ ಮಾಡಿದ್ದ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ತ್ರಿ ಸದಸ್ಯ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಹಲವು ಸಂಗತಿಗಳನ್ನು ಬಯಲು ಮಾಡಿದೆ.

 

ಆರಂಭದಲ್ಲಿ ಇಡೀ ಪ್ರಕರಣವನ್ನು ಅಧಿಕಾರಿಗಳು ಮುಚ್ಚಿ ಹಾಕಲು ಯತ್ನಿಸಿದ್ದ ಸಂದರ್ಭದಲ್ಲಿ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಮತ್ತಿತರರು ಇದರ ಬಗ್ಗೆ ದನಿ ಎತ್ತಿದ್ದರು. ಅಲ್ಲದೇ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಿದ್ದರು. ಆ ನಂತರ ಈ ಕುರಿತು ಸತ್ಯಾಂಶಗಳನ್ನು ಪತ್ತೆ ಹಚ್ಚಲು ತ್ರಿಸದಸ್ಯ ಸಮಿತಿ ರಚನೆಯಾಗಿತ್ತು.

 

ತ್ರಿಸದಸ್ಯ ಸಮಿತಿ ನೀಡಿರುವ ಸತ್ಯಶೋಧನಾ ವರದಿ ಕುರಿತು ಸಚಿವ ಮಹಾದೇವಪ್ಪ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.   ಸಮಿತಿಯು ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

‘ಆದರೆ ಈ ಕ್ರಮಕ್ಕೆ ಮುಂದಾಗದೇ ಕಾರ್ಯಕ್ರಮ ಆಯೋಜನೆ ಮಾಡಿರುವುದು ಮತ್ತು ಎಲ್ಲರೂ ಭಾಗವಹಿಸಿರುವುದು, ಮೈಕ್‌, ಹಾಡು, ಡ್ಯಾನ್ಸ್‌, ಊಟದ ವ್ಯವಸ್ಥೆ ಮಾಡಿರುವುದು ನೋಡಿದರೆ ಇದು ಯಾವುದೂ ಒಂದು ರೀತಿಯ ಸ್ವ ಹಿತಾಸಕ್ತಿಯ ಉದ್ದೇಶದಿಂದಲೇ ಮಾಡಿರುವ ಕಾರ್ಯಕ್ರಮ ಎಂಬುದು ಕಂಡುಬರುತ್ತದೆ,’ ಎಂದು ನಿಖರವಾಗಿ ಹೇಳಿರುವುದು ವರದಿಯಿಂದ ಗೊತ್ತಾಗಿದೆ.

 

ಈ ವಿದ್ಯಾರ್ಥಿನಿಯರ ನಿಲಯದ ಆವರಣದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ 18 ವರ್ಷದೊಳಗಿನ 70 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ ಅಪ್ರಾಪ್ತ ಬಾಲಕಿಯರು ಇರುವಾಗ ಸಂಜೆ, ರಾತ್ರಿ ವೇಳೆ ಯಾವುದೇ ಕಾರ್ಯಕ್ರಮ ಆಯೋಜಿಸುವಾಗ ಸ್ಪಷ್ಟ ನಿಯಮ ಮತ್ತು ಕ್ರಮ ಬದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜಿಸಿರುವುದು ಕಂಡು ಬಂದಿದೆ ಎಂಬ ಅಂಶವನ್ನೂ ಸಮಿತಿಯು ಈ ವರದಿಯಲ್ಲಿ ದಾಖಲಿಸಿದೆ.

 

ಇನ್ನು ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತನಿಖಾ ತಂಡ ಮತ್ತೊಂದು ಪ್ರಮುಖ ಅಂಶವನ್ನು ಗಮನಿಸಿದೆ. ‘2023ರ ನವೆಂಬರ್‍‌ 16ರಂದು ನಿಜವಾಗಿ ಯಾವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬುದನ್ನು ಪ್ರಾಮಾಣಿಕವಾಗಿ ಸತ್ಯ ಹೇಳುವಲ್ಲಿ ಎಲ್ಲಾ ಅಧಿಕಾರಿಗಳೂ ಹಾಗೂ ವಿದ್ಯಾರ್ಥಿನಿಯರ ನಿಲಯದ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ತನಿಖಾ ತಂಡವು ಸಾಬೀತು ಮಾಡಿದೆ.

 

‘ಎಲ್ಲಾ ಅಧಿಕಾರಿಗಳು ಮತ್ತು ವಿದ್ಯಾರ್ಥಿನಿ ನಿಲಯದ ಸಿಬ್ಬಂದಿಗಳು ಹಿಂದೇಟು ಹಾಕಿದ್ದು ಸತ್ಯವನ್ನು ಮರೆಮಾಚಲು ಸಂಪೂರ್ಣವಾಗಿ ಪ್ರಯತ್ನಿಸಿರುವುದು ಕಂಡು ಬಂದಿದೆ,’ ಎಂದು ವರದಿಯಲ್ಲಿ ವಿವರಿಸಿದೆ.

 

ಅದೇ ರೀತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು, ಅಧಿಕಾರಿಯೇತರ ಅನೇಕ ಜನ ಭಾಗವಹಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರ ಹೆಸರು, ಭೇಟಿ ನೀಡಿದ ಉದ್ದೇಶ, ಒಳಗಡೆ ಬಂದ ಸಮಯ, ಹೊರಗಡೆ ಹೋದ ಸಮಯ, ಸಂಪರ್ಕ ಸಂಖ್ಯೆ ಹಾಗೂ ವಿವರಗಳು ಯಾವುದೇ ದಾಖಲೆಗಳಲ್ಲಿ ಸಹಿ ಇರಲಿಲ್ಲ. ಯಾವುದೇ ಚಲನವಲನ ವಹಿಗಳನ್ನು ನಿರ್ವಹಿಸಿರುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಪ್ರಾಪ್ತ ವಯಸ್ಸಿನವರೊಂದಿಗೆ ಡ್ಯಾನ್ಸ್‌; ವಿದ್ಯಾರ್ಥಿನಿಯರ ಹಕ್ಕು, ಗುರುತು, ಸ್ವಾತಂತ್ರ್ಯ, ಗೌಪ್ಯತೆಗೆ ಧಕ್ಕೆ

ಶಾಮಿಯಾನ, ಮೈಕ್‌ ಸೆಟ್‌ ಹಾಕಿದವರು, ಅಧಿಕಾರಿಗಳ ಕಾರು ಚಾಲಕರು, ಪಟಾಕಿ ಮಾಲೀಕ ಅವರ ಮಗ, ಮಾಧ್ಯಮದವರು ಹೊರಡಗಡೆಯಿಂದ ಮೈಸೂರ್‍‌ ಪಾಕ್‌ ತಂದವ ಮತ್ತು ಇತರರ ವಿವರ ಎಲ್ಲೂ ದಾಖಲಾಗಿರುವುದು ಕಂಡು ಬಂದಿಲ್ಲ ಎಂದು ವರದಿಯಿಂದ ಗೊತ್ತಾಗಿದೆ.

 

‘ತನಿಖೆಯಲ್ಲಿ ಜಿಲ್ಲಾಧಿಕಾರಿಗಳನ್ನು ಹೊರತುಪಡಿಸಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳು ಮತ್ತು ಇತರರು 2023ರ ನವೆಂಬರ್‍‌ 16ರಂದು ಆಯೋಜಿಸಿದ್ದ ಕಾರ್ಯಕ್ರಮ ಸಾಯಂಕಾಲ 6.30ರಿಂದ 7.30ರ ಒಳಗೆ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಮಾತ್ರ ರಾತ್ರಿ 8.45ಕ್ಕೆ ಕಾರ್ಯಕ್ರಮ ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ. ಇದು ನಿಜವಾಗಿ ಯಾವ ಉದ್ದೇಶದಿಂದ ಮಾಡಿರುವ ಕಾರ್ಯಕ್ರಮ ಎಂಬ ಸತ್ಯವನ್ನು ಮರೆಮಾಚಿರುವುದು ಕಂಡು ಬರುತ್ತದೆ,’ ಎಂದು ಸಮಿತಿಯು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

 

18 ವರ್ಷದೊಳಗಿನ ವಿದ್ಯಾರ್ಥಿನಿಯರು ಇರು ನಿಲಯದ ಒಳಗೆ ಯಾವುದೇ ನಿಯಮ, ಶಿಷ್ಠಾಚಾರ, ಕ್ರಮ ಬದ್ಧತೆ ಇಲ್ಲದೇ ಖಾಸಗಿ ದೃಶ್ಯ ಮಾಧ್ಯಮದವರು ನಿಲಯದ ಆವರಣದೊಳಗೆ ಬಂದು ಮಕ್ಕಳ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿದೆ. ಮಕ್ಕಳನ್ನು ಮಾತನಾಡಿಸಿ ಆ ದೃಶ್ಯಗಳನ್ನು ಮತ್ತು ತುಣುಕುಗಳನ್ನು ದೃಶ್ಯ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಪ್ರಸಾರ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಮಕ್ಕಳ ಹಿತದೃಷ್ಟಿಯಿಂದ ಈ ವಿದ್ಯಾರ್ಥಿನಿಯರ ನಿಲಯ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖೆಗಳಿಂದ ನಡೆಯುವ ಶಿಕ್ಷಣ ಸಹಿತ ಹಾಗೂ ಶಿಕ್ಷಣ ರಹಿತ ವಸತಿ ನಿಲಯಗಳಲ್ಲಿ ನಡೆಯುವ ಯಾವುದೇ ರಾಷ್ಟ್ರೀಯ ಕಾರ್ಯಕ್ರಮ, ದಿನಾಚರಣೆ, ಹಬ್ಬ ಮತ್ತು ವಸತಿ ನಿಲಯದ ವಿವಿಧ ಸಮಾರಂಭ, ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಸೂಕ್ತ ನಿಯಮಾವಳಿಗಳು, ರೀತಿನೀತಿ, ರೂಪರೇಷೆ, ನಿರ್ದಿಷ್ಟ ಕ್ರಮಬದ್ಧ ಕಾರ್ಯವಿಧಾನವಾಗಲೀ ಸ್ಪಷ್ಟ ಲಿಖಿತ ನಿರ್ದೇಶನವಾಗಲಿ ಅಥವಾ ಸೀಮಿತ ಮಾನದಂಡವಾಗಲಿ ಯಾವುದೂ ಇರಲಿಲ್ಲ ಎಂದು ವರದಿ ಹೇಳಿದೆ.

 

ಇದು ಮಕ್ಕಳು ಸಂಘಟಿಸಿದ ಕಾರ್ಯಕ್ರಮ, ಅವರೇ ಮಾಡಿದ್ದು ಎಂದು ಅಧಿಕಾರಿಗಳು ತನಿಖಾ ಸಮಯದಲ್ಲಿ ಹೇಳಿದ್ದಾರೆ. ಮಕ್ಕಳು ಕೂಡಾ ಏನಾಯಿತು ಎಂಬ ನಿಜವಾದ ಘಟನೆಯನ್ನು ಮರೆಮಾಚಿ ಯಾವುದೇ ತಪ್ಪು ನಡೆದಿಲ್ಲ, ನಮಗೆ ತೊಂದರೆ ನೀಡಿಲ್ಲ ನಾವು ಡ್ಯಾನ್ಸ್ ಮಾಡಿದ್ದು ನಿಜ. ಆದರೆ ಯಾವ ಅಧಿಕಾರಿಗಳು ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದು ಅಧಿಕಾರಿಗಳು ಮಕ್ಕಳ ಬಾಯಲ್ಲಿ ಹೇಳಿಸುವಲ್ಲಿ ತನಿಖೆಗೆ ಒಳಪಡಿಸಿದ ಅಧಿಕಾರಿಗಳು ಯಶಸ್ವಿಯಾಗಿದ್ದರು ಎಂಬ ಸಂಗತಿಯು ವರದಿಯಿಂದ ಗೊತ್ತಾಗಿದೆ.

 

ಆದರೆ ಹಿರಿಯ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಕೈ ಕೈ ಹಿಡಿದು ಅಧಿಕಾರಿಗಳು ಹಾಡಿಗೆ ಡ್ಯಾನ್ಸ್‌ ಮಾಡಿದ್ದು ಕಂಡು ಬಂದಿದೆ. ಇದು ಇಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳ ಸಿಬ್ಬಂದಿಗಳ ಸಭ್ಯ ನಡೆಯಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

18 ವರ್ಷದೊಳಗಿನ ವಿದ್ಯಾರ್ಥಿನಿಯರನ್ನು ಸಮಿತಿ ಸದಸ್ಯರು ಮಾತನಾಡಿಸಿದ್ದಾರೆ. ‘ಕಾರ್ಯಕ್ರಮದಲ್ಲಿ ನಮಗೆ ಯಾವುದೇ ತೊಂದರೆ ಆಗಿಲ್ಲ, ಯಾರೂ ಅಶಬ್ಯವಾಗಿ ನಡೆದುಕೊಂಡಿಲ್ಲ ಎಂದು ಅಧಿಕಾರಿಗಳ ಒತ್ತಡದಿಂದ ಹೇಳಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಒಟ್ಟಾರೆ ಪ್ರಕರಣದಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಎದುರಿಸಬೇಕಾಯಿತು ಎಂಬ ಅಂಶವನ್ನು ವ್ಯಕ್ತಪಡಿಸಿರುವುದು ಕಂಡು ಬಂದಿದೆ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img