Sunday | June 14, 2026 |

7 ಹುದ್ದೆಗಳ ಸೃಜನೆಗೆ 104 ಹುದ್ದೆ ರದ್ದು!; ಪಟ್ಟಭದ್ರ ಹಿತಾಸಕ್ತಿ ತಾಳಕ್ಕೆ ಕುಣಿದ ಸರ್ಕಾರ, ದಲಿತ ಅಧಿಕಾರಿಗಳಿಗೆ ವಂಚನೆ?

Support THE-FILE

spot_img

ಬೆಂಗಳೂರು; ರಾಜ್ಯದ ಖಜಾನೆ ಇಲಾಖೆಯಲ್ಲಿ 7 ಹುದ್ದೆಗಳನ್ನು ಸೃಜಿಸಲು 104 ಹುದ್ದೆಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರವು ಹೊರಟಿದೆ. ಅಲ್ಲದೇ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಲುಕಿದಂತಿರುವ  ಇದೇ ಇಲಾಖೆಯು ಪದನ್ನೋತಿಗಳ ಸೃಜನೆ ಮಾಡುವುದರಲ್ಲಿಯೂ ಅವೈಜ್ಞಾನಿಕ ಮತ್ತು ತಾರತಮ್ಯ ಎಸಗಲು ಮುಂದಾಗಿದೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳಿಗೆ ವಂಚನೆಯಾಗಲಿರುವುದು ಇದೀಗ ಬಹಿರಂಗವಾಗಿದೆ.

 

ಆರ್ಥಿಕ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕತ್ತಲಲ್ಲಿರಿಸಿರುವ ಪಟ್ಟಭದ್ರ ಹಿತಾಸಕ್ತಿಗಳ ಮುಖವಾಡವನ್ನು ಖುದ್ದು ಸಚಿವ ಸತೀಶ್‌ ಜಾರಕಿಹೊಳಿ ಅವರು ನೇರವಾಗಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ.

 

2026ರ ಫೆ.11ರಂದು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಖಜಾನೆ ಇಲಾಖೆಯ ವಿವಿಧ ಹುದ್ದೆಗಳನ್ನು ಮೇಲ್ದರ್ಜೆಗೇರಿಸಲು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು 2026ರ ಜನವರಿ 31ರಂದು ನಿರ್ದೇಶನ ನೀಡಿದ್ದಾರೆ. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಅವರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

2022-23ರಲ್ಲಿಯೇ ಖಜಾನೆ ಇಲಾಖೆಯು ಕೆಲವು ಹುದ್ದೆಗಳನ್ನು ಉನ್ನತೀಕರಿಸಿತ್ತು. ಆದರೆ ಇದು ವೈಜ್ಞಾನಿಕವಾಗಿರಲಿಲ್ಲ ಮತ್ತು ನ್ಯಾಯಸಮ್ಮತವಾಗಿರಲಿಲ್ಲ. ಹಾಗೆಯೇ ಮುಖ್ಯ ಖಜಾನೆ ಇಲಾಖೆಯ ಆಯುಕ್ತರ ಅಡಿಯಲ್ಲಿ ಹೆಚ್ಚುವರಿ ಆಯುಕ್ತರು, ನಿರ್ದೇಶಕರು (ಕೆಎಎಎಸ್‌) ಶ್ರೇಣಿ ಹುದ್ದೆಗಳನ್ನು ಕೋರಿತ್ತು. ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇದಕ್ಕೆ ಅನುಮತಿ ನೀಡಿರಲಿಲ್ಲ.

 

ಆದರೂ ಪಟ್ಟಭದ್ರ ಹಿತಾಸಕ್ತಿಗಳ ಮಣಿದಿರುವ ಖಜಾನೆ ಇಲಾಖೆಯು ಇದೀಗ 7 ಹುದ್ದೆಗಳನ್ನು ಸೃಜಿಸಲು ಹೊರಟಿದೆ. ಇದರಿಂದಾಗಿ 104 ಹುದ್ದೆಗಳು ರದ್ದುಗೊಳ್ಳುವ ಸಾಧ್ಯತೆಗಳಿವೆ.  ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಮಹತ್ವದ ದಾಖಲೆಗಳು ಮತ್ತು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

ಸತೀಶ್‌ ಜಾರಕಿಹೊಳಿ ಅವರ ಪತ್ರದಲ್ಲೇನಿದೆ?

 

ರಾಜ್ಯದ ಖಜಾನೆ ಇಲಾಖೆಯ ನಿರ್ದೇಶಕರ (ಆಡಳಿತ) ಹುದ್ದೆಗೆ ಪ್ರಸ್ತುತ ಇಲಾಖೆಯಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳಡಿ, ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಲ್ಲಿ ಜೇ‍ಷ್ಠತೆಯ ಆಧಾರದ ಮೇರೆಗೆ ಪದನ್ನೋತಿ ಮೇರೆಗೆ ನಿಯೋಜಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ.  ಆರ್ಥಿಕ ಇಲಾಖೆಯ ಪತ್ರ (ಸಂಖ್ಯೆ; ಆಇ 91 ಅಖಿ 2022, 31-01-2026) ಅನ್ವಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಹಮತಿ ನೀಡಿದೆ. ಇದರ ಅನ್ವಯ ಖಜಾನೆ ಇಲಾಖೆ ನಿರ್ದೇಶಕರ (ಆಡಳಿತ) ಹುದ್ದೆಗೆ ಕೆಎಎಸ್‌ ವೃಂದದ ಅಧಿಕಾರಿಯನ್ನು ನಿಯುಕ್ತಿಗೊಳಿಸಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ತಿದ್ದುಪಡಿ ಪ್ರಸ್ತಾವನೆ ಸಲ್ಲಿಸುವಂತೆ ಸೃಜಿಸಲಾಗಿದೆ ಎಂದು ಸರ್ಕಾರದ ಗಮನ ಸೆಳೆದಿರುವುದು ಪತ್ರದಿಂದ ಗೊತ್ತಾಗಿದೆ.

 

 

ಖಜಾನೆ ಇಲಾಖೆಯ ಉತತಮ ಕಾರ್ಯನಿರ್ವಹಣೆಯಲ್ಲಿ ಈ ಹಿಂದಿನಿಂದಲೂ ಸೇವೆ ಸಲ್ಲಿಸುತ್ತಿದ್ದಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲವೊಂದು ಪದನ್ನೋತಿಗಳ ಸೃಷ್ಟಿಗಾಗಿ 2016ರ ನಂತರ ಹಲವು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.

 

ಆಡಳಿತಾತ್ಮಕ ಅನುಕೂಲತೆ ದೃಷ್ಟಿಯಿಂದ ಐಎಎಸ್‌ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೇ ಹೆಚ್ಚುವರಿ ನಿರ್ದೇಶಕರು ಮತ್ತು ನಿರ್ದೇಶಕರ ಹುದ್ದೆಯನ್ನೂ (ಮೇಲ್ದರ್ಜೆ)  ಸೃಜಿಸಲಾಗಿದೆಯಾದರೂ  ಚಾಲ್ತಿಯಲ್ಲಿದ್ದಂತಹ ವೈಜ್ಞಾನಿಕ ಕ್ರಮವನ್ನು ಅನುಸರಿಸಿಲ್ಲ. ಬದಲಿಗೆ ತಾರತಮ್ಯ ಎಸಗುವುದರ ಮೂಲಕ ಸಮಗ್ರ ಪರಿಷ್ಕರಣೆಯನ್ನು ಜಾರಿಗೊಳಿಸಿಲ್ಲ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಪ.ಜಾತಿ, ಪ.ಪಂಗಡ ಅಧಿಕಾರಿಗಳಿಗೆ ವಂಚನೆ?

 

ಪಟ್ಟಭದ್ರ ಹಿತಾಸಕ್ತಿಗಳ ತಕ್ಕಂತೆ ಕುಣಿಯುತ್ತಿರುವ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳನ್ನು ಖಜಾನೆ ಇಲಾಖೆಯ ನಿರ್ದೇಶಕರ (ಆಡಳಿತ) ಹುದ್ದೆಯಿಂದ ದೂರ ಇರಿಸಲು ಮುಂದಾಗಿದೆ. ‘ಪ್ರಸ್ತುತ ಖಜಾನೆ ಇಲಾಖೆಯ ಆಡಳಿತಾಧಿಕಾರಿಗಳ ಹುದ್ದೆಗೆ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯನ್ನು ನೇಮಕ ಮಾಡಲು ವೃಂದ ಮತ್ತು ನೇಮಕಾತಿಗೆ ನಿಯಮಗಳಿಗೆ ತಿದ್ದುಪಡಿ ಮಾಡಲು ಪ್ರಸ್ತಾವ ಸಲ್ಲಿಕೆಯಾಗಿದೆ.

 

ಇದರಿಂದ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಆಡಳಿತಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಅನುಭವ ಹೊಂದಿರುವ ಮತ್ತು ಈ ಹುದ್ದೆ ನಿರ್ವಹಣೆ ಮಾಡುವ ಜ್ಞಾನವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳು ಅವಕಾಶ ವಂಚಿತರಾಲಿದ್ದಾರೆ,’ ಎಂದು ಸತೀಶ್ ಜಾರಕಿಹೊಳಿ ಅವರು ಸರ್ಕಾರದ ಗಮನಸೆಳೆದಿರುವುದು ಗೊತ್ತಾಗಿದೆ.

 

 

ಅಲ್ಲದೇ ಕೆಲವೇ ಕೆಲವು ಹಿತಾಸಕ್ತಿಗಳು ಸಮಿತಿ ರಚಿಸಿಕೊಂಡು ಕೆಎಎಸ್‌ ಅಧಿಕಾರಿಗಳನ್ನು ನಿರ್ದೇಶಕರ ಸ್ಥಾನಕ್ಕೆ  ನೇಮಕ ಮಾಡುವ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ಇದನ್ನು ತಡೆಹಿಡಿಯಬೇಕು. ಹೀಗಾಗಿ ಖಜಾನೆ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ವೃಂದದ ಸಿಬ್ಬಂದಿ ಮತ್ತು ಅಧಿಕಾರಿಗಳ ಸಮಗ್ರ ವೃಂದ ಮತ್ತು ನೇಮಕಾತಿ ಸಮಿತಿ ರಚಿಸಬೇಕು. ಮತ್ತು ಎಲ್ಲಾ ಹುದ್ದೆಗಳನ್ನು ತಿದ್ದುಪಡಿ ಮತ್ತು ವೈಜ್ಞಾನಿಕವಾದ ಸಮರ್ಪಕವಾದ ಪರಿಷ್ಕರಣೆ ಪ್ರಸ್ತಾವ ಸಿದ್ಧಪಡಿಸುವುದು ಸೂಕ್ತವಾಗಿದೆ ಎಂದು ಜಾರಕಿಹೊಳಿ ಅವರು ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

 

ಖಜಾನೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು 1961ರಿಂದ 2016ರವರೆಗೂ ಖಜಾನೆ ನಿರ್ದೇಶನಾಲಯದ ಅಡಿಯಲ್ಲಿಯೇ ಜಾರಿಯಲ್ಲಿದ್ದವು. 2016 ಮತ್ತು 2023ರಲ್ಲಿ ಕೆಲವು ಸೀಮಿತ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಆದೇಶಗಳ ಮೂಲಕ ಉನ್ನತೀಕರಣ ಮಾಡಲಾಗಿತ್ತು.

 

2022-23ರಲ್ಲಿ ಖಜಾನೆಯ ಇಲಾಖೆಯ ಕೆಲವು ಹುದ್ದೆಗಳನ್ನು ಉನ್ನತೀಕರಿಸಲಾಗಿತ್ತು. ಇದು ವೈಜ್ಞಾನಿಕವಾಗಿ ಸರಿಯಿರಲಿಲ್ಲ ಮತ್ತು ನ್ಯಾಯಸಮ್ಮತವಾಗಿಯೂ ಇರಲಿಲ್ಲ. ಹಾಗೆಯೇ ಆಯುಕ್ತರ ಅಡಿಯಲ್ಲಿ ಹೆಚ್ಚುವರಿ ಆಯುಕ್ತರು, ನಿರ್ದೇಶಕರು (ಕೆಎಎಸ್‌) ಶ್ರೇಣಿ ಹುದ್ದೆಗಳನ್ನು ಕೋರಿದ್ದರೂ ಸಹ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅನುಮತಿ ನೀಡಿರಲಿಲ್ಲ.

 

ಅಲ್ಲದೇ ‘ಇಲಾಖೆಯು ರಚಿಸಿರುವ ಸಮಿತಿಗಳು ಮಂಡಿಸಿದ್ದ ವಿವರಗಳು ಸಹ ವೈಜ್ಞಾನಿಕವಾಗಿ ಚರ್ಚೆಗೆ ಒಳಗಾಗಿರಲಿಲ್ಲ. ಪಿಪಿಎಆರ್‍‌ ಅನುಮತಿಯನ್ನು ಪರಿಶೀಲಿಸಿರಲಿಲ್ಲ. ಇಲಾಖೆಯ ಯಾವುದೇ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ತಾರತಮ್ಯವಾಗದೇ ಜೇಷ್ಠತೆ ಅನುಭವದ ಅನುಗುಣವಾಗಿ ಸಮಾನ ನ್ಯಾಯ ಸಿಗಬೇಕಿದೆ,’ ಎನ್ನುತ್ತಾರೆ ಖಜಾನೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

2023ರ ಜುಲೈ 28ರಂದು ಖಜಾನೆ ಇಲಾಖೆಯಲ್ಲಿ ಹೊಸದಾಗಿ 169 ಹುದ್ದೆಗಳನ್ನು ಸೃಜಿಸಿದ್ದಲ್ಲದೇ 285 ಹುದ್ದೆಗಳನ್ನು ರದ್ದುಪಡಿಸಿ ಆದೇಶಿಸಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಹಮತಿ ಮೇರೆಗೆ ಒಂದು ಕೆಎಎಸ್‌ ವೃಂದದ ನಿರ್ದೇಶಕರ ಹುದ್ದೆಯನ್ನು ಸೇರ್ಪಡೆಗೊಳಿಸಲು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ತಿದ್ದುಪಡಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2026ರ ಜನವರಿ 31ರಂದು ಖಜಾನೆ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದರು.

 

 

ಇಲಾಖೆಯಲ್ಲಿ ಸದ್ಯ 3,146 ಹುದ್ದೆಗಳಿವೆ. ಹೊಸದಾಗಿ 185 ಹುದ್ದೆಗಳನ್ನು ಸೃಜಿಸಲು ಪ್ರಸ್ತಾವಿಸಲಾಗಿದೆ. ಈ ಹುದ್ದೆಗಳ ಸೃಜನೆಯಿಂದ 235 ಹುದ್ದೆಗಳು ರದ್ದಾಗಲಿವೆ.

 

 

ಸೃಜನೆ ಮತ್ತು ರದ್ದತಿಯ ನಂತರ ಇಲಾಖೆಯಲ್ಲಿ ಒಟ್ಟಾರೆ 3,096 ಹುದ್ದೆಗಳು ಉಳಿದುಕೊಳ್ಳಲಿವೆ ಎಂದು ಗೊತ್ತಾಗಿದೆ.

 

 

ಅದೇ ರೀತಿ 2023ರ ಮೇ 19ರಂದು ಹೊರಡಿಸಿದ್ದ ಆದೇಶದ ಪ್ರಕಾರ ಖಜಾನೆ ಇಲಾಖೆಯಲ್ಲಿ ಆಯುಕ್ತರೂ ಸೇರಿದಂತೆ ಒಟ್ಟಾರೆ 3,146 ಹುದ್ದೆಗಳಿದ್ದವು. 169 ಹುದ್ದೆಗಳನ್ನು ಸೃಜಿಸಲಾಗಿತ್ತು. ಇದರಿಂದ 285 ಹುದ್ದೆಗಳು ರದ್ದಾಗಿದ್ದವು. ಅಂತಿಮವಾಗಿ 3,030 ಹುದ್ದೆಗಳಿದ್ದವು.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img