Sunday | June 21, 2026 |

ಬೆಳೆ ಸಮೀಕ್ಷೆ; ಬಿಎಸ್‌ವೈ, ನಟ ದರ್ಶನ್‌, ಬಿ ಸಿ ಪಾಟೀಲ್‌ ವಿಡಿಯೋ ತುಣುಕು ಪ್ರಸಾರಕ್ಕೆ 62 ಲಕ್ಷ ವೆಚ್ಚ

Support THE-FILE

spot_img

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಬಿ ಸಿ ಪಾಟೀಲ್‌ ಮತ್ತು ಕೃಷಿ ಇಲಾಖೆ ರಾಯಭಾರಿ ನಟ ದರ್ಶನ್‌ ಅವರು ಬೆಳೆ ಸಮೀಕ್ಷೆ ಕುರಿತು ವಿಡಿಯೋ ತುಣಕುಗಳನ್ನು ಪ್ರಸಾರ ಮಾಡಿದ್ದ 11 ಸುದ್ದಿವಾಹಿನಿಗಳಿಗೆ 62.62 ಲಕ್ಷ ರು. ವೆಚ್ಚವಾಗಿದೆ.

ಕೃಷಿ ಇಲಾಖೆಗೆ ರಾಯಭಾರಿಯಾಗಿರುವ ನಟ ದರ್ಶನ್‌ ಅವರು ಯಾವುದೇ ಸಂಭಾವನೆ ಪಡೆದುಕೊಳ್ಳದಿದ್ದರೂ ಬೆಳೆ ಸಮೀಕ್ಷೆ ಕುರಿತು ಮಾಡಿದ್ದ ವಿಡಿಯೋ ತುಣುಕುಗಳ ಪ್ರಸಾರಕ್ಕೆ 62.62 ಲಕ್ಷ ರು ವೆಚ್ಚವಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಹಣ ಬಿಡುಗಡೆ ಮಾಡಲು ಕೃಷಿ ಇಲಾಖೆ ಆಯುಕ್ತರು ಅನುಮೋದನೆ ಕೋರಿ 2021ರ ಡಿಸೆಂಬರ್‌ 7ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

2021-22ನೇ ಸಾಲಿನ ಬೆಳೆ ಸಮೀಕ್ಷೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ ಸಿ ಪಾಟೀಲ್‌, ಕೃಷಿ ಇಲಾಖೆ ರಾಯಭಾರಿ ಹಾಗೂ ನಟ ದರ್ಶನ್‌ ಅವರು 40 ಸೆಕೆಂಡುಗಳ ವಿಡಿಯೋ ತುಣಕುಗಳನ್ನು ಸುದ್ದಿವಾಹಿನಿಗಳಲ್ಲಿ 2021ರ ಸೆಪ್ಟಂಬರ್‌ 27ರಿಂದ ಡಿಸೆಂಬರ್‌ 3ರವರೆಗೆ ಬಿತ್ತರಿಸಲಾಗಿತ್ತು. ಯಕ್ಷಿ ಕಮ್ಯುನಿಕೇಷನ್‌ ಮತ್ತು ಎಂಸಿ ಅಂಡ್‌ ಎ ಮೂಲಕ ಸುದ್ದಿವಾಹಿನಿಗಳಿಗೆ ಜಾಹೀರಾತು ಬಿಡುಗಡೆ ಮಾಡಲಾಗಿತ್ತು ಎಂಬುದು ಕೃಷಿ ಆಯುಕ್ತರ ಪತ್ರದಿಂದ ಗೊತ್ತಾಗಿದೆ.

ಟಿ ವಿ 9 ಕನ್ನಡ, ನ್ಯೂಸ್‌ 18 ಕನ್ನಡ, ಸುವರ್ಣ ನ್ಯೂಸ್‌, ಟಿ ವಿ 5 ಕನ್ನಡ, ಪವರ್‌ ಟಿವಿ, ಪಬ್ಲಿಕ್‌ ಟಿವಿಗೆ ಯಕ್ಷಿ ಕಮ್ಯುನಿಕೇಷನ್‌ ಮೂಲಕ ಬಿಡುಗಡೆಯಾಗಿದ್ದ ಜಾಹೀರಾತಿಗೆ 30,77,440 ರು., ಎಂ ಸಿ ಅಂಡ್‌ ಎ ಮೂಲಕ ಪಬ್ಲಿಕ್‌ ಟಿವಿ, ದಿಗ್ವಿಜಯ ನ್ಯೂಸ್‌ ಟಿವಿ, ಬಿ ಟಿ ವಿ ನ್ಯೂಸ್‌, ನ್ಯೂಸ್‌ ಫಸ್ಟ್‌, ಪ್ರಜಾ ಟಿವಿ ಮತ್ತು ರಾಜ್‌ ನ್ಯೂಸ್‌ಗೆ ಬಿಡುಗಡೆಯಾಗಿದ್ದ ಜಾಹೀರಾತಿಗೆ 31, 85,056 ರು. ವೆಚ್ಚವಾಗಿತ್ತು.

ಕೃಷಿ ಇಲಾಖೆ ಆಯುಕ್ತರು ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರ

2021-22ನೇ ಸಾಲಿನ ಬೆಳೆ ಸಮೀಕ್ಷೆ ಕುರಿತು ರಾಜ್ಯದ ರೈತರಲ್ಲಿ ಅರಿವು ಮೂಡಿಸಲು 40 ಸೆಕೆಂಡುಗಳ ವಿಡಿಯೋ ತುಣುಕುಗಳನ್ನು ರಾಜ್ಯದ 11 ಸುದ್ದಿವಾಹಿನಿಗಳಿಗೆ ಪ್ರಚಾರ ಪಡಿಸಿರುವ ಸಂಬಂಧ ತಗುಲಿರುವ 62,62,496 ರುಗ.ಳನ್ನು ಸಂಬಂಧಿಸಿದ ಸಂಸ್ಥೆಗಳಿಗೆ ಪಾವತಿಸುವ ಪ್ರಸ್ತಾವನೆಗೆ ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯ ಕೋರಿ ಕಡತವನ್ನು 2022ರ ಜನವರಿ 13ರಂದು ಸಲ್ಲಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

2020-21ರ ಸಾಲಿನಲ್ಲಿ ಸುಮಾರು 256. 77 ಲಕ್ಷ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೂ ಒಟ್ಟು 228.05 ಲಕ್ಷ ತಾಲೂಕುಗಳ ಶೇ.88.81ರಷ್ಟು ಬೆಳೆ ಸಮೀಕ್ಷೆ ಮಾಡಲಾಗಿದೆ. 2020-21ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಒಟ್ಟು 12.80 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img