Thursday | June 18, 2026 |

ನೇಕಾರರ ವಿದ್ಯುತ್‌ ಶುಲ್ಕ; ಅಧಿಕಾರಿಗಳ ಲೋಪದಿಂದ ಬಾಕಿ ಉಳಿದಿದೆ 268 ಕೋಟಿ ಬಾಕಿ

Support THE-FILE

spot_img

ಬೆಂಗಳೂರು; ಅವಶ್ಯಕತೆಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಕೊಳ್ಳದಿರುವುದು ಮತ್ತು ಅನುದಾನ ಕಲ್ಪಿಸಿಕೊಳ್ಳದಿರುವುದು ಸೇರಿದಂತೆ ಅಧಿಕಾರಿಗಳ ಲೋಪದಿಂದಾಗಿ ಕೈ ಮಗ್ಗ ನೇಕಾರರ ವಿದ್ಯುತ್‌ ಬಾಕಿ 268.94 ಕೋಟಿ ರು. ಬಾಕಿ ಉಳಿದಿದೆ. ಸರ್ಕಾರ ಅನುದಾನ ನೀಡುತ್ತಿದೆಯಾದರೂ ಈ ಅನುದಾನವೆಲ್ಲ ಬಡ್ಡಿ ಮೊತ್ತಕ್ಕೆ ಜಮಾ ಆಗಿರುವ ಸಾಧ್ಯತೆಗಳೇ ಹೆಚ್ಚಿವೆ. ಇಷ್ಟೊಂದು ಹೊಣೆಗಾರಿಕೆ ಬೃಹತ್‌ ಪ್ರಮಾಣದಲ್ಲಿ ಬೆಳೆದ ನಂತರ ಕೈಮಗ್ಗ ಮತ್ತು ಜವಳಿ ಇಲಾಖೆ ಎಚ್ಚೆತ್ತುಕೊಂಡಿದೆ.

ಕೈಮಗ್ಗ ವಿದ್ಯುತ್‌ ನೇಕಾರರ ಬಾಕಿ ವಿದ್ಯುತ್ ಶುಲ್ಕ ಮೊತ್ತದಲ್ಲಿ ಸರ್ಕಾರದಿಂದ ಒದಗಿಸಬೇಕಾದ ಬಾಕಿ ಸಹಾಯ ಧನ ಮೊತ್ತವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ನೇರವಾಗಿ ಬಿಡುಗಡೆಗೊಳಿಸಬೇಕು ಎಂದು ಇಂಧನ ಇಲಾಖೆ ಪ್ರಸ್ತಾಪಿಸಿರುವ ಬೆನ್ನಲ್ಲೇ ನೇಕಾರರ ಬಾಕಿ ಉಳಿದಿರುವ ವಿದ್ಯುತ್‌ ಶುಲ್ಕ ಮೊತ್ತವೂ ಮುನ್ನೆಲೆಗೆ ಬಂದಿದೆ. ನೇಕಾರರ ಸಮ್ಮಾನ ಯೋಜನೆ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ವಿದ್ಯುತ್‌ ಶುಲ್ಕ ಪಾವತಿಯಾಗದೇ ಬಾಕಿ ಉಳಿದಿರುವ ಸಂಬಂಧ ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.

ಬಾಕಿ ವಿದ್ಯುತ್‌ ಶುಲ್ಕ ಮೊತ್ತಕ್ಕೆ ಸಂಬಂಧಿಸಿದಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯು ಆರ್ಥಿಕ ಇಲಾಖೆಗೆ ಈ ಸಂಬಂಧ ಸ್ಪಷ್ಟೀಕರಣ ಕೋರಿದೆ. ಈ ಸಂಬಂಧ ಇಲಾಖೆಗೆ ಸಲ್ಲಿಸಿರುವ  ಟಿಪ್ಪಣಿ ಹಾಳೆ ‘ದಿ ಫೈಲ್‌’ಗೆ ಲಭ್ಯವಾಗಿದೆ.

268.94 ಕೋಟಿ ಮೊತ್ತದಷ್ಟು ವಿದ್ಯುತ್‌ ಶುಲ್ಕ ಬಾಕಿ ಉಳಿದಿರುವ ಕಾರಣ ಈ ಮೊತ್ತವನ್ನು ಪಾವತಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯು ಹೆಚ್ಚಿನ ಅನುದಾನ ಕೋರಿತ್ತು. ಅನುದಾನ ಹಂಚಿಕೆಯಾಗದ ಕಾರಣ ಇಷ್ಟೊಂದು ಮೊತ್ತ ಬಾಕಿ ಉಳಿಯಲು ಕಾರಣ ಎಂದು ಆಡಳಿತ ಇಲಾಖೆಯು ಆರ್ಥಿಕ ಇಲಾಖೆಗೆ ಮಾಹಿತಿ ಒದಗಿಸಿದೆ.

ಆದರೆ ಆರ್ಥಿಕ ಇಲಾಖೆಯು ನೇಕಾರರ ಪ್ಯಾಕೇಜ್‌ನಡಿಯಲ್ಲಿ ಒಟ್ಟಾರೆಯಾಗಿ ಅನುದಾನವನ್ನು ಹಂಚಿಕೆ ಮಾಡುತ್ತದೆ. ಆದ್ಯತೆ ಮೇಲೆ ವೆಚ್ಚಗಳನ್ನು ಅವಶ್ಯಕತೆಗೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ರೂಪಿಸಿಕೊಳ್ಳದಿರುವುದು ಕೂಡ ವಿದ್ಯುತ್‌ ಶುಲ್ಕ ಬಾಕಿ ಉಳಿಯಲು ಮತ್ತೊಂದು ಕಾರಣ ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ವಿದ್ಯುತ್‌ ಶುಲ್ಕವನ್ನು ಬಾಕಿ ಉಳಿಸಿಕೊಳ್ಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಈವರೆವಿಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಆದರೆ ಆರ್ಥಿಕ ಇಲಾಖೆಯು ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪಿಕೊಂಡಿಲ್ಲ. ‘ಅವಶ್ಯಕತೆಗೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ಆಡಳಿತ ಇಲಾಖೆಯು ರೂಪಿಸಿಕೊಳ್ಳಬೇಕು. ಹೀಗೆ ಹೊಣೆಗಾರಿಕೆ ಬೃಹತ್‌ ಪ್ರಮಾಣದಲ್ಲಿ ಬೆಳೆದ ನಂತರ ಅದರಲ್ಲೂ ಇಂಧನ ಇಲಾಖೆ ಬೇಡಿಕೆ ಕಳಿಸಿ ಆರ್ಥಿಕ ಇಲಾಖೆ ಸ್ಪಷ್ಟೀಕರಣ ಕೋರಿದಾಗ ನೀಡಿರುವ ಈ ಉತ್ತರವೂ ಸಮರ್ಪಕವಾಗಿಲ್ಲ,’ ಎಂದು ಆಡಳಿತ ಇಲಾಖೆಗೆ ಅಭಿಪ್ರಾಯಿಸಿದೆ.

ವಿದ್ಯುತ್‌ ಸಹಾಯಧನಕ್ಕೆ ವಾರ್ಷಿಕವಾಗಿ 70-75 ಕೋಟಿ ರು. ಬೇಕಾಗುತ್ತದೆ. ಅವಶ್ಯವಿರುವ ಅನುದಾನ ಹಂಚಿಕೆಯಾಗದ ಕಾರಣ ಬಾಕಿ ಇದೆ. ಅಲ್ಲದೆ ಹಿಂದಿನ ವರ್ಷಗಳಲ್ಲಿ ಆರ್ಥಿಕ ವರ್ಷಾಂತ್ಯದಲ್ಲಿ ಅನುದಾನವು ಸಮರ್ಪಕವಾಗಿ ವೆಚ್ಚವಾಗದೆ ಉಳಿತಾಯ ಮಾಡಲಾಗಿದೆ. ಇದರ ಬದಲಿಗೆ ಇಂತಹ ಬಾಕಿಗಳನ್ನು ಪಾವತಿಸಬಹುದಿತ್ತು. ಆದರೆ ಅಧಿಕಾರಿಗಳು ಬಾಕಿ ಪಾವತಿಸಲು ಕ್ರಮ ಕೈಗೊಂಡಿಲ್ಲ ಎಂಬುದು ಗೊತ್ತಾಗಿದೆ.

ನೇಕರಾರರ ಪ್ಯಾಕೇಜ್‌ಗೆ ಸಂಬಂಧಿಸಿದಂತೆ 2016-17ರಲ್ಲಿ ಒಟ್ಟಾರೆ 27126.6 ಲಕ್ಷ ರು.ಗಳನ್ನು ನೀಡಲಾಗಿತ್ತು. ಈ ಅವಧಿಯಲ್ಲಿ ಯಾವುದೇ ಸಬ್ಸಿಡಿ ನೀಡಲಾಗಿರಲಿಲ್ಲ. ಅದೇ ರೀತಿ 2017-18ರಿಂದ 2021-21ರಲ್ಲಿ ಇತರೆ ವೆಚ್ಚಗಳಿಗೆ ಅನುದಾನ ನೀಡದ ಸರ್ಕಾರವು ಸಬ್ಸಿಡಿ ಮೊತ್ತವನ್ನು ನೀಡಿತ್ತು. 2017-18ರಲ್ಲಿ ಒಟ್ಟಾರೆ 29374 ಲಕ್ಷ ರು., 1080,690 ಲಕ್ಷ ರು., 2019-20ರಲ್ಲಿ 28131.82 ಲಕ್ಷ ರು., 2020-21ರಲ್ಲಿ ಒಟ್ಟಾರೆ 13708.97 ಲಕ್ಷ ರು.ಗಳನ್ನು ಪ್ಯಾಕೇಜ್‌ನಲ್ಲಿ ಘೋಷಿಸಲಾಗಿತ್ತು.

ಬಿಡುಗಡೆಯಾಗುವ ಸಹಾಯಧನವನ್ನು ಮೊದಲಿಗೆ ಬಡ್ಡಿಗೆ ಜಮೆ ತೆಗೆದುಕೊಂಡು ನಂತರ ಅಸಲಿಗೆ ಜಮೆ ತೆಗೆದುಕೊಳ್ಳಲಾಗುತ್ತದ. ಅಂದರೆ ಇಲಾಖೆಯು ಪಾವತಿಸುತ್ತಿರುವ ಅನುದಾನವೆಲ್ಲಾ ಬಹುಶಃ ಬಡ್ಡಿ ಮೊತ್ತಕ್ಕೆ ಜಮೆ ಆಗಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ಗೊತ್ತಾಗಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img