Sunday | September 13, 2026 |

ಲಸಿಕೆ; 35 ಸಾವಿರ ಕೋಟಿಯಲ್ಲಿ ಕೇಂದ್ರ ಖರ್ಚು ಮಾಡಿದ್ದು ಕೇವಲ 2,993 ಕೋಟಿ

Support THE-FILE

spot_img

ಬೆಂಗಳೂರು; ಲಸಿಕೆ ಅಭಿಯಾನಕ್ಕೆ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಒಟ್ಟು 35,000 ಕೋಟಿ ರು. ಪೈಕಿ ಕೇಂದ್ರ ಸರ್ಕಾರವು ಬಳಕೆ ಮಾಡಿರುವುದು ಕೇವಲ ಶೇ.8.5ರಷ್ಟನ್ನು ಮಾತ್ರ.

2021-22ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 35,000 ಕೋಟಿ ರೂ.ಗಳನ್ನು ಲಸಿಕೆ ಅಭಿಯಾನಕ್ಕೆ (7 4.7 ಶತಕೋಟಿ) ನಿಗದಿಪಡಿಸಿತ್ತು. ಆದರೀಗ ಕೇವಲ 2,993 ಕೋಟಿ ರು. ಮಾತ್ರ ಖರ್ಚು ಮಾಡಿ 32,000 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಲಸಿಕೆ ಅಭಿಯಾನದಲ್ಲಿ 500 ದಶಲಕ್ಷ ಜನರು ಒಳಗೊಳ್ಳಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೀಗ ಖರ್ಚು ಮಾಡಿರುವ ಪರಿ ನೋಡಿದರೆ ಆ ನಿರೀಕ್ಷೆಯು ಸುಳ್ಳಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರತಿ ಡೋಸ್‌ಗೆ 150 ರು. ದರದಲ್ಲಿ ಕೇಂದ್ರ ಸರ್ಕಾರವು ಲಸಿಕೆ ಖರೀದಿಸುತ್ತಿದೆ. ಇದರ ಪ್ರಕಾರ 2.1 ಬಿಲಿಯನ್‌ ಡೋಸ್‌ಗಳನ್ನು ಖರೀದಿಸಬಹುದು. ಆದರೆ ದೇಶದಲ್ಲಿ 18ಕ್ಕಿಂತ ಮೇಲ್ಪಟ್ಟ ವಯೋಮಾನದವರ ಸಂಖ್ಯೆ 2021ರಲ್ಲಿ 940 ಮಿಲಿಯನ್‌ ಇದೆ. ಹೀಗಾಗಿ 1.88 ಬಿಲಿಯನ್‌ ಡೋಸ್‌ ಅಗತ್ಯವಿದೆ. ಅಲ್ಲದೆ ಎಲ್ಲಾ ವಯೋಮಾನದವರಿಗೆ 2 ಡೋಸ್‌ ನೀಡಬೇಕೆಂದಾದರೆ ಇನ್ನುಳಿದ ಶೇ. 80ರಷ್ಟು ಹಣವನ್ನು ಬಳಸಬೇಕಾಗುತ್ತದೆ.

ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು 18ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಶೀಲ್ಡ್‌ ಲಸಿಕೆ ನೀಡಲು ಸುಮಾರು 5,715 ಕೋಟಿ ಖರ್ಚು ಮಾಡಬೇಕು. ಇದು ಉತ್ತರ ಪ್ರದೇಶ ಸರ್ಕಾರದ 2021-22ರ ಆರೋಗ್ಯ ಬಜೆಟ್‌ನಲ್ಲಿ ಶೇ.18ರಷ್ಟಿದೆ. ಅಲ್ಲದೆ ಕೋವಾಕ್ಸಿನ್‌ನ್ನೂ ಖರೀದಿಸಬೇಕಾದರೆ ಇದರ ವೆಚ್ಚವು 2,000 ಕೋಟಿಯಿಂದ 7,620 ಕೋಟಿಗೆ ಹೆಚ್ಚಳವಾಗಲಿದೆ. ಒಟ್ಟಾರೆ ಆರೋಗ್ಯ ಬಜೆಟ್‌ನಲ್ಲಿ ಶೇ. 23ರಷ್ಟಾಗುತ್ತದೆ ಎಂದು ತಿಳಿದು ಬಂದಿದೆ.

ಅಲ್ಲದೆ 16.5 ಮಿಲಿಯನ್ ಡೋಸ್ ಕೋವಿಶೀಲ್ಡ್ (11 ಮಿಲಿಯನ್) ಮತ್ತು ಸ್ಥಳೀಯ ಕೊವಾಕ್ಸಿನ್ (5.5 ಮಿಲಿಯನ್) ಸಂಗ್ರಹಿಸಲು ಸರ್ಕಾರ 350 ಕೋಟಿ ರೂ. ( 47 ಮಿಲಿಯನ್) ಖರ್ಚು ಮಾಡಿತ್ತು. ಲಸಿಕಾಕರಣ ಕಾರ್ಯಕ್ರಮಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ 123 ಕೋಟಿ ರೂ. ಖರ್ಚು ಮಾಡಿದೆ.

ಇದಲ್ಲದೆ, ಸರ್ಕಾರವು 21 ಮಿಲಿಯನ್ ಕೋವಿಶೀಲ್ಡ್‌ಗೆ 1,732.50 ಕೋಟಿ ಮತ್ತು 2021 ಏಪ್ರಿಲ್ 28 ರಂದು 50 ಮಿಲಿಯನ್ ಡೋಸ್ ಕೋವಾಕ್ಸಿನ್‌ಗಾಗಿ 787.50 ಕೋಟಿ ಖರ್ಚು ಮಾಡಿದೆ. ಸೀರಮ್‌ ಇನ್ಸಿಟಿಟ್ಯೂಟ್‌ ಆಫ್ ಇಂಡಿಯಾ ಕಂಪನಿಗೆ 2021ರ ಏಪ್ರಿಲ್‌ 28ರಂದು 1,732.50 ಕೋಟಿ ರು.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ. 10 ಕೋಟಿ ಡೋಸ್‌ ಕೋವಿಶೀಲ್ಡ್‌ ಲಸಿಕೆ ಬೇಡಿಕೆ ಪೈಕಿ 2021ರ ಮೇ 3ರ ಹೊತ್ತಿಗೆ 8.744 ಕೋಟಿ ಡೋಸ್‌ ವಿತರಿಸಿದೆ ಎಂದು ಕೇಂದ್ರ ಸರ್ಕಾರದ ಇತ್ತೀಚಿನ ಮಾಹಿತಿಯಿಂದ ತಿಳಿದು ಬಂದಿದೆ.

ಅದೇ ರೀತಿ ಮೇ, ಜೂನ್‌ ಮತ್ತು ಜುಲೈ ಅವಧಿಗೆ ಒಟ್ಟು 05 ಕೋಟಿ ಕೊವಾಕ್ಸಿನ್‌ ಡೋಸ್‌ಗಳ ಪೂರೈಕೆಗಾಗಿ ಭಾರತ್ ಬಯೋಟೆಕ್‌ ಇಂಡಿಯಾ ಲಿಮಿಟೆಡ್‌ಗೆ 2021ರ ಏಪ್ರಿಲ್‌ 28ರಂದು 787.50 ಕೋಟಿ ರು.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ. 02 ಕೋಟಿ ಕೊವಾಕ್ಸಿನ್‌ ಲಸಿಕೆ ಡೋಸ್‌ಗಳ ಪೈಕಿ 2021ರ ಮೇ 3ರ ಹೊತ್ತಿಗೆ 0.8813 ಕೋಟಿ ಡೋಸ್‌ಗಳನ್ನು ವಿತರಿಸಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img